ಮೇಷ
ಆರ್ಥಿಕ ವಿಷಯದಲ್ಲಿ ನಿಮಗೆ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಕುಟುಂಬದ ವಿಚಾರದಲ್ಲಿ ನೆಮ್ಮದಿಯಿರುವುದರಿಂದ ಶುಭ ಕಾರ್ಯಗಳು ನಡೆಯುತ್ತವೆ. ಉತ್ತಮ ಆರೋಗ್ಯವಿದೆ. ಗುರುಹಿರಿಯರನ್ನು ಗೌರವಿಸುವುದನ್ನು ಮರೆಯಬೇಡಿ. ಸಕಾಲದಲ್ಲಿ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿವೆ. ನಿಮಗೆ ಉತ್ತಮ ಒಳ್ಳೆಯ ಸಂಗಾತಿ ದೊರೆಯುವ ಸಾಧ್ಯತೆಗಳಿವೆ. ಆದಷ್ಟು ದುಷ್ಟ ವ್ಯಕ್ತಿಗಳಿಂದ ದೂರವಿರಲು ಪ್ರಯತ್ನಿಸಿ. ಇಲ್ಲವಾದಲ್ಲಿ ಅಪವಾದಗಳು ನಿಮ್ಮನ್ನು ಸುತ್ತುವರಿಯಲಿವೆ.