ಮುಖ್ಯ ಪುಟ ಮಾಸಿಕ ಭವಿಷ್ಯ (Monthly Prediction)
ಜೂನ್ 2013
ಮಾಸಿಕ ಭವಿಷ್ಯ
 
ಮೇಷ
ಇತರರಿಗೆ ಮಾದರಿಯಾಗಲಿದ್ದೀರಿ. ಆತ್ಮೀಯ ಗೆಳೆಯರ ಸಂಪರ್ಕದೊಂದಿಗೆ ತಮಾಷೆ, ಹರಟೆಯಲ್ಲಿ ಭಾಗಿಯಾಗುವ ಸಾಧ್ಯತೆ. ನಿಮ್ಮ ಇಷ್ಟದ ಸ್ಥಳಕ್ಕೆ ಅಚ್ಚರಿಯ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ವಿಶೇಷ ಔತಣಕೂಟಗಳಲ್ಲಿ ಪಾಲ್ಗೊಳ್ಳುತ್ತೀರಿ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಲಿದೆ. ಯುವತಿಯರು ಇಷ್ಟಪಟ್ಟ ವ್ಯಕ್ತಿಯೊಂದಿಗೆ ವಿವಾಹ ಬಂಧನ ನೆರವೇರಲಿದೆ. ಚಿನ್ನಾಭರಣಗಳ ಖರೀದಿ ಸಾಧ್ಯತೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಹಿರಿಯರನ್ನು ಗೌರವಿಸಿದಲ್ಲಿ ನಿಮ್ಮ ಗೌರವಗಳು ಹೆಚ್ಚಾಗಲಿವೆ. ಕೆಲ ಸಮಾರಂಭಗಳಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವ ಅವಕಾಶಗಳಿವೆ.
 
ರಾಶಿ ಗುಣಗಳು