ಮಕರ
ಈ ರಾಶಿಯವರು ಸುಮಧುರ ಸಂಗೀತ, ನಗೆ ಚಟಾಕಿ, ಕ್ರೀಡಾಪಟುವಿನ ಗುಣಗಳನ್ನು ಹೊಂದಿರುತ್ತಾರೆ. ಉಪಯೋಗಕ್ಕೆ ಬರುವ ಉಡುಗೊರೆಗಳನ್ನು ಮಾತ್ರ ಇಷ್ಟಪಡುತ್ತಾರೆ. ಆಭರಣಗಳು, ಬ್ರೀಫ್‌ಕೇಸ್, ಸಾಹಿತ್ಯ, ಸುಗಂಧ ದ್ರವ್ಯಗಳನ್ನು ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿ ಕುಟುಂಬದವರ ಇಚ್ಚೆಗೆ ಅನುಸಾರವಾಗಿ ನಡೆದು ಪ್ರೀತಿಗೆ ಪಾತ್ರರಾಗುತ್ತಾರೆ. ಹಿರಿಯರನ್ನು ಗೌರವಿಸಿದಲ್ಲಿ ಕುಟುಂಬದಲ್ಲಿ ನಿಮ್ಮ ಘನತೆ, ಗೌರವಗಳು ಹೆಚ್ಚಾಗುತ್ತವೆ. ವಿದೇಶ ಪ್ರಯಾಣದ ಯೋಗವಿದೆ. ಗೆಳೆಯರನ್ನು ನಂಬಿ ದುಂದು ವೆಚ್ಚ ಮಾಡಿದಲ್ಲಿ ನಷ್ಟ ಎದುರಿಸುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ಶೀಘ್ರದಲ್ಲಿ ಕಂಕಣಬಲ ಕೂಡಿ ಬರಲಿದೆ. ನಿರುದ್ಯೋಗಿಗಳಿಗೆ ಶೀಘ್ರದಲ್ಲಿ ಉದ್ಯೋಗದ ಅವಕಾಶಗಳು ದೊರೆಯಲಿವೆ.