ವೃಶ್ಚಿಕ
ಈ ರಾಶಿಯವರು ವಿಶೇಷ ಸಂದರ್ಭಗಳಲ್ಲಿ ತುಂಬಾ ತಮಾಷೆಯ ಗುಣವನ್ನು ಹೊಂದಿರುತ್ತಾರೆ. ತಾವು ನಕ್ಕು ಇತರರನ್ನು ನಗಿಸುವ ಸ್ವಭಾವದವರು. ಧಾರ್ಮಿಕ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಹೊಂದಿರುತ್ತಾರೆ. ಆಕರ್ಷಕ ವಸ್ತುಗಳನ್ನು ಉಡುಗೊರೆಯಾಗಿ ಬಯಸುತ್ತಾರೆ. ಯಾವುದೇ ಉದ್ಯೋಗದಲ್ಲಿರಲಿ ತುಂಬಾ ಬಿಜಿಯಾಗಿರಲು ಬಯಸುತ್ತಾರೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ಮದುವೆಯಾಗುವ ಸಾಧ್ಯತೆಗಳಿವೆ. ಗುರುಹಿರಿಯರನ್ನು ಗೌರವಿಸಿ. ಗೆಳೆಯರನ್ನು ನಂಬಿ ಹಣಕಾಸಿನ ವ್ಯವಹಾರ ಮಾಡಬೇಡಿ. ದುಂದುವೆಚ್ಚ ಮಾಡಿದಲ್ಲಿ ತುಂಬಾ ನಷ್ಟ ಉಂಟಾಗುವ ಸಾಧ್ಯತೆಗಳಿವೆ.