ವೃಶ್ಚಿಕ
ಈ ರಾಶಿಯವರಿಗೆ ವರ್ಷದ ಆರಂಭದಲ್ಲಿ ಗುರು ದ್ವಾದಶ ಸ್ಥಾನದಲ್ಲಿರುವುದರಿಂದ ಅಧಿಕ ತಿರುಗಾಟವು , ಕೆಲಸ ಕಾರ್ಯಗಳಲ್ಲಿ ಧನಹಾನಿಯು ವಂಚನೆಯಾಗುವ ಸಾಧ್ಯತೆಗಳು ಎದುರಾಗುತ್ತವೆ, ಕೆಲವರಿಗೆ ಭೂವ್ಯವಹಾರದಲ್ಲಿ ಅಪಾರ ನಷ್ಟ ಸಂಭವಿಸುತ್ತದೆ. ಹೊಸ ಯೋಜನೆಗಳನ್ನು ಬಹು ಎಚ್ಚರಿಕೆಯಿಂದ ಕೈಗೊಳ್ಳಬೇಕು, ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರೆಯುವುದು ,ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗೌರವ ಹೆಚ್ಚಾಗಿ ಸಹದ್ಯೋಗಿಗಳಿಗೆ ಅಸಮಧಾನ,
ಶುಭ ಫಲಗಳು ದೊರೆಯುತ್ತವೆ. ಸರಕಾರಿ ನೌಕರರಲ್ಲಿ ವರ್ಗಾವಣೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ, ಅವಿವಾಹಿತರಿಗೆ ವಿವಾಹ ಯೋಗ ಉತ್ತಮವಾಗಿರುತ್ತದೆ. ಹಣದ ವಿಚಾರದಲ್ಲಿ ಜಾಗೃತರಾಗಿರಬೇಕು, ಎಲ್ಲರೊಂದಿಗೆ ನಿಷ್ಟೂರ ಹೊಂದುತ್ತೀರಿ. ನಿಮ್ಮ ಕನಸುಗಳು ಸುಲಭದಲ್ಲಿ ನನಸಾಗಲಿವೆ.ವರ್ಷದ ಮಧ್ಯದಿಂದ ಧನಲಾಭವು, ಸ್ವಂತ ವ್ಯಾಪಾರದಲ್ಲಿ ಅಭಿವೃದ್ದಿಯು, ಉದ್ಯೋಗದಲ್ಲಿ ಒಳ್ಳೆಯ ಅಭಿವೃದ್ದಿಯನ್ನು ಹೊಂದುವಿರಿ,ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರುತ್ತವೆ.