ಮುಖ್ಯ ಪುಟ ನಿತ್ಯ ಭವಿಷ್ಯ (Daily Prediction)
20 ಅಕ್ಟೋಬರ್ 2014
ನಿತ್ಯ ಭವಿಷ್ಯ
 
ರಹಸ್ಯ ವಿತಾರಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ಕುಟುಂಬದಲ್ಲಿ ಪ್ರೇಮ ಅನುರಾಗಗಳು ಹೆಚ್ಚಾಗುತ್ತವೆ.
 
 
ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ, ಸ್ತ್ರೀಯರಿಂದ ಆರ್ಥಿಕ ಹಾನಿಯಾಗುವ ಸಾಧ್ಯತೆಗಳಿರುವುದರಿಂದ ದೂರವಿರಲು ಪ್ರಯತ್ನಿಸಿ.
 
 
ಸೃಜನಾತ್ಮಕತೆ ಹಾಗೂ ಸಮಯಸ್ಪೂರ್ತಿ ತೋರುವುದರಿಂದ ನಿಮಗೆ ಗೌರವಗಳು ಹೆಚ್ಚಾಗುವ ಸಾಧ್ಯತೆಗಳಿವೆ. ರಾಜಕೀಯ ವರ್ಗದವರಿಗೆ ತಮ್ಮ ಆಶೆಗಳನ್ನು ಈಡೇರಿಸಲು ಇದು ಸಕಾಲ.
 
 
ಕರ್ಕಾಟಕ
ಚುನಾವಣೆಯಲ್ಲಿ ಗೆಲುವು ನಿಮ್ಮದಾಗುವ ಸಾಧ್ಯತೆಗಳಿವೆ. ಜನರೊಂದಿಗೆ ಬೆರೆಯುವುದನ್ನು ಮರೆಯಬೇಡಿ.ನಿಮ್ಮ ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ.
 
 
ಕುಟುಂಬದವರ ನೆರವು ಪ್ರಾಪ್ತವಾಗುತ್ತದೆ. ಹೊಸ ವಾಹನ ಖರೀದಿಸಲು ನೀವು ಯೋಚಿಸಬಹುದು. ನಿಮ್ಮ ಸಂಗಾತಿಯಿಂದ ಸಂತೋಷ ಸಿಗುತ್ತದೆ.
 
 
ಸುಖದಾಯಕ ಕೆಲಸಗಳನ್ನು ಮಾಡುವುದರಲ್ಲಿ ನೀವು ನಿರತರಾಗಲಿದ್ದೀರಿ. ಮನರಂಜನೆಗಾಗಿ ಯೋಚಿಸುವ ಸಮಯ ಇದು.
 
 
ನಿಮ್ಮ ಕಾರ್ಯಸ್ಥಳದಲ್ಲಿ ಅನುಕೂಲಕರ ಗಳಿಗೆ ಸದ್ಯದಲ್ಲೇ ಆರಂಭವಾಗಲಿದೆ. ನೀವೀಗ ಹೆಚ್ಚು ಸಮರ್ಥರಾಗಿದ್ದೀರಿ. ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡುತ್ತಾರೆ.
 
 
ವೃಶ್ಚಿಕ
ನಿಮ್ಮ ವ್ಯವಹಾರ ವರ್ಧನೆಗೆ ಇದು ಸಕಾಲ.ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ.
 
 
ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಸಿಂಹ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ.
 
 
ಆರ್ಥಿಕ ವಿಷಯದಲ್ಲಿ ನಿಮಗೆ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಕುಟುಂಬದ ವಿಚಾರದಲ್ಲಿ ನೆಮ್ಮದಿಯಿರುವುದರಿಂದ ಶುಭ ಕಾರ್ಯಗಳು ನಡೆಯುತ್ತವೆ. ಉತ್ತಮ ಆರೋಗ್ಯವಿದೆ.
 
 
ಗುರುಹಿರಿಯರನ್ನು ಗೌರವಿಸುವುದನ್ನು ಮರೆಯಬೇಡಿ. ಸಕಾಲದಲ್ಲಿ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿವೆ. ನಿಮಗೆ ಉತ್ತಮ ಒಳ್ಳೆಯ ಸಂಗಾತಿ ದೊರೆಯುವ ಸಾಧ್ಯತೆಗಳಿವೆ.
 
 
ಆದಷ್ಟು ದುಷ್ಟ ವ್ಯಕ್ತಿಗಳಿಂದ ದೂರವಿರಲು ಪ್ರಯತ್ನಿಸಿ. ಇಲ್ಲವಾದಲ್ಲಿ ಅಪವಾದಗಳು ನಿಮ್ಮನ್ನು ಸುತ್ತುವರಿಯಲಿವೆ. ಅಧ್ಯಾತ್ಮಕತೆ ಮತ್ತು ದೈವ ಭಕ್ತಿಯತ್ತ ಒಲವು ತೋರುತ್ತೀರಿ.