ಮುಖ್ಯ ಪುಟ ನಿತ್ಯ ಭವಿಷ್ಯ (Daily Prediction)
24 ಮೇ 2013
ನಿತ್ಯ ಭವಿಷ್ಯ
 
ಇಂದು ಭಾವಾವೇಶಗಳಿಗೆ ನಿಮ್ಮ ಮನಸ್ಸು ಮಣಿಯಲು ಅವಕಾಶ ನೀಡಬೇಡಿ. ನಿಮ್ಮ ಹೃದಯಕ್ಕೆ ಹತ್ತಿರವಾದವರೊಂದಿಗೆ ಸರಸಭರಿತ ಸಂಜೆಯನ್ನು ಕಳೆಯಲು ಪ್ರಶಸ್ತವಾದ ದಿನ.ನಿರುದ್ಯೋಗಿಗಳಿಗೆ ಶುಭಕಾಲ.
 
 
ಆರ್ಥಿಕ ತೊಂದರೆ ಇರುವುದಿಲ್ಲ. ನಿರುದ್ಯೋಗಿಗಳು ಸಣ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ಥಿರಾಸ್ಥಿ, ತೋಟಗಾರಿಕೆ ಮಾಡುವ ಪ್ರಯತ್ನ ಫಲಿಸುತ್ತವೆ.ಮನೆಯಲ್ಲಿ ಶಾಂತಿ ನೆಲಸಲಿದೆ.
 
 
ಆರ್ಥಿಕ ಅಭಿವೃದ್ಧಿ ಇಲ್ಲದಿದ್ದರೂ ಸಂತೃಪ್ತಿ ಇರುವುದಿಲ್ಲ .ಕಿರಾಣಿ ಮತ್ತು ಮುದ್ರಣ ರಂಗದವರಿಗೆ ಉತ್ತಮ ಕಾಲ. ನೂತನ ಆಲೋಚನೆಗಳು ನಿಮ್ಮನ್ನು ಕಾಡುತ್ತವೆ.ಅಧ್ಯಾತ್ಮಿಕತೆಯತ್ತ ಒಲವು.
 
 
ಕರ್ಕಾಟಕ
ಅಧಿಕ ತಿರುಗಾಟವು , ಕೆಲಸ ಕಾರ್ಯಗಳಲ್ಲಿ ಧನಹಾನಿಯು ವಂಚನೆಯಾಗುವ ಸಾಧ್ಯತೆಗಳು ಎದುರಾಗುತ್ತವೆ, ಕೆಲವರಿಗೆ ಭೂವ್ಯವಹಾರದಲ್ಲಿ ಅಪಾರ ನಷ್ಟ ಸಂಭವಿಸುತ್ತದೆ.ಹಣದ ವೆಚ್ಚ ಹೆಚ್ಚಾಗಲಿದೆ.
 
 
ಅಕಸ್ಮಿಕವಾಗಿ ನಿಮ್ಮ ಕಾರ್ಯಕ್ರಮಗಳು ಅದಲುಬದಲಾಗಲಿವೆ. ಉಕ್ಕು, ಸಿಮೆಂಟ್ ವ್ಯಾಪಾರಿಗಳಿಗೆ ಉತ್ತಮ ಕಾಲ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ.ಕೌಟಂಬಿಕ ಕಲಹ.
 
 
ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಪ್ರೇಮಿಯ ಮನಸ್ಸನ್ನು ಗೆಲ್ಲುವಿರಿ.
 
 
ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ.ಬಡ್ತಿ ಸಾಧ್ಯತೆ.
 
 
ವೃಶ್ಚಿಕ
ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಆರೋಗ್ಯವು ಚಿಂತೆಯ ವಿಷಯವಾಗದು. ಕೆಲವು ಮಹತ್ವದ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ. ಗೌರವ ಹೆಚ್ಚಾಗಲಿದೆ.
 
 
ಸಿನಿಮಾ ರಂಗದ ಆಕರ್ಷಣೆ ನಿಮ್ಮನ್ನು ಸದಾ ಕಾಡುತ್ತದೆ. ಇದೇ ರಂಗದಲ್ಲಿ ಮುಂದುವರೆದಲ್ಲಿ ನಿಮ್ಮ ಕನಸುಗಳು ನನಸಾಗಬಹುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.ಹಿರಿಯರಿಂದ ಕರೆ ಬರಲಿದೆ.
 
 
ವಿದ್ಯಾಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸ್ಥಿರ- ಚರಾಸ್ತಿ ವಿವಾದಗಳು ನ್ಯಾಯಾಲಯದಲ್ಲಿ ಬಗೆಹರಿಯುತ್ತವೆ.ಮಾನಸಿಕ ನೆಮ್ಮದಿ.
 
 
ವಸ್ತ್ರ , ಬಂಗಾರ,ಬೆಳ್ಳಿ ವ್ಯಾಪಾರಿಗಳಿಗೆ ಹೆಚ್ಚಿನ ಅಭಿವೃದ್ಧಿಯಾಗುತ್ತದೆ. ಮಾನಸಿಕ ನೆಮ್ಮದಿಯ ಕೊರತೆ ಕಾಣಿಸುತ್ತದೆ. ಆರೋಗ್ಯದ ವಿಷಯದಲ್ಲಿ ಜಾಗ್ರತೆ.ಪ್ರವಾಸ ಯೋಗವಿದೆ.
 
 
ಇತರರಿಗಿಂತ ಮುಂದೆ ತಂದು ಸಲ್ಲಿಸುತ್ತದೆ. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ ಮತ್ತು ಸಹೋದ್ಯೋಗಿಗಳೊಂದಿಗೆ ವಾಗ್ವಾದ ಮಾಡುವುದರಿಂದ ದೂರವಿರಿ. ಹಣದ ವೆಚ್ಚ ಹೆಚ್ಚಾಗಲಿದೆ.