ಪ್ರೀತಿಯ Guest, ಜ್ಯೋತಿಷ್ಯ ಚಾನೆಲ್‌ಗೆ ಸ್ವಾಗತ.
 
ವಿವಾಹವಿರಲಿ, ಯಾವುದೇ ಮಂಗಳ ಕಾರ್ಯವಿರಲಿ, ಮನೆಗೆ ಹೊಸ ಸದಸ್ಯನ ಸೇರ್ಪಡೆಯೇ ಇರಲಿ. ಭಾರತೀಯ ಕುಟುಂಬಗಳಲ್ಲಿ ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲೇ ಎಲ್ಲಾ ಕಾರ್ಯಗಳನ್ನು ನಿಗದಿಪಡಿಸಲಾಗುತ್ತದೆ ಮತ್ತು ಅದಕ್ಕಾಗಿ ಪ್ರಶಸ್ತ ದಿನ ನೋಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ವೆಬ್‌ದುನಿಯಾ ನಿಮಗಾಗಿ 'ಜಾತಕ ಹೊಂದಿಕೆ' ಮತ್ತು 'ಜಾತಕ ರಚನೆ'ಯ ಸೌಲಭ್ಯವನ್ನು ಒದಗಿಸುತ್ತಿದೆ. ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ ನೀವು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ಮಾತ್ರವಲ್ಲದೆ ನೀವು ನಿಮ್ಮ ಹಾಗೂ ನಿಮ್ಮ ಕುಟುಂಬಿಕರ ಜಾತಕ ಬಲವನ್ನು ಹೋಲಿಸಿನೋಡಬಹುದು ಹಾಗೂ ರಚಿಸಲೂಬಹುದು.

 
 
Login ID:
Password:
 
ಈ ಸೇವೆ ಸದ್ಯಕ್ಕೆ ಭಾರತದಲ್ಲಿರುವ ನಗರಗಳಿಗೆ ಮಾತ್ರ ಲಭ್ಯವಿದೆ.ಇದನ್ನು ಅಂತರಾಷ್ಟ್ರೀಯ ನಗರಗಳಿಗೆ ಸದ್ಯದಲ್ಲೇ ವಿಸ್ತರಿಸಲಾಗುತ್ತದೆ
 
ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ (ವರಾಹಾವತಾರಿ), ಹಿರಣ್ಯಕಶಿಪುವೆಂಬ ದೈತ್ಯನನ್ನು ಸಿಗಿದ (ನರಸಿಂಹಾವತಾರಿ), ಬಲಿಯನ್ನು ಪಾತಾಳಕ್ಕೆ ತಳ್ಳಿದ (ವಾಮನಾವತಾರಿ), ಕ್ಷತ್ರಿಯರನ್ನು ಸಂಹರಿಸಿದ (ಪರಶುರಾಮಾವತಾರಿ), ರಾವಣನನ್ನು ಜಯಿಸಿದ (ರಾಮಾವತಾರಿ), ಹಲಧರ ಬಲರಾಮನ ಸಹೋದರ (ಕೃಷ್ಣಾವತಾರಿ), ಕಾರುಣ್ಯಮೂರ್ತಿ (ಬೌದ್ಧಾವತಾರಿ) ಮತ್ತು ಮ್ಲೇಚ್ಛರನ್ನು ಬಡಿದೋಡಿಸುವ (ಕಲ್ಕಿ ಅವತಾರಿ) ಕೃಷ್ಣಾ... ನಿನಗೆ ನಮಸ್ಕಾರಗಳು.
 
ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ ದೇವ, ಮೋದಕ-ಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶನ ಚೌತಿ ಉತ್ಸವದ ಸಡಗರಕ್ಕೆ ನಾಡಿಗೆ ನಾಡೇ ಸಿದ್ಧವಾಗಿದೆ. ಈ ವಕ್ರತುಂಡನನ್ನು ಹಾಸ್ಯ ಸಾಹಿತಿಗಳು ಹಲವಾರು ವಕ್ರ ತುಂಡೋಕ್ತಿಗಳ ಮೂಲಕ ಆವಾಹಿಸಿದ್ದಾರೆ, ಸ್ತುತಿಸಿದ್ದಾರೆ, ಭಜಿಸಿದ್ದಾರೆ, ಅರ್ಚಿಸಿದ್ದಾರೆ, ಮೆಚ್ಚಿಸಿದ್ದಾರೆ.