ಮುಖ್ಯ ಪುಟ ಟಾರಟ್ ಭವಿಷ್ಯನುಡಿ (Tarot Prediction)
ಟಾರಟ್ ಭವಿಷ್ಯನುಡಿ

ಚಿತ್ರಗಳು ಮತ್ತು ಸಂಕೇತಗಳನ್ನು ಹೊಂದಿರುವ 78 ಕಾರ್ಡುಗಳ ಗುಂಪು ವ್ಯಾಖ್ಯಾನಿಸುವ ಭವಿಷ್ಯ ನುಡಿಯನ್ನು ಜೀವನವನ್ನು ಸನ್ಮಾರ್ಗದಲ್ಲಿ ಮುಂದುವರಿಸಲು ಬಳಸಲಾಗುತ್ತದೆ. ಈ ಕಾರ್ಡುಗಳನ್ನು ಒಂದು ಘಟನೆ ಅಥವಾ ವ್ಯಕ್ತಿಯ ಭೂತ, ವರ್ತಮಾನ ಮತ್ತು ಭವಿಷ್ಯ ಅರಿಯಲು ಬಳಸಬಹುದು ಮತ್ತು ವಿಸ್ಮಯಕರ ಕಾರ್ಯ ಮತ್ತು ವಿಧಿಗಳಲ್ಲಿ ಇದು ಶಕ್ತಿಶಾಲಿ ಉಪಕರಣವಾಗಬಹುದು. ಟಾರಟ್ ಅನ್ನು 22 ಮೇಜರ್ ಅರ್ಕಾಣ ಅಥವಾ ಟ್ರಂಪ್ ಕಾರ್ಡುಗಳು ಮತ್ತು 56 ಮೈನರ್ ಅರ್ಕಾಣ ಅಥವಾ ಸೂಟ್ ಕಾರ್ಡುಗಳಾಗಿ ವಿಂಗಡಿಸಬಹುದು. ಮೇಜರ್ ಅರ್ಕಾಣಗಳು ಅಧಿಕ ಸಂಭಾವ್ಯತೆಗಳನ್ನು ಬಿಂಬಿಸಿದರೆ, ಮೈನರ್ ಅರ್ಕಾಣಗಳು ಈ ಟ್ರಂಪ್ ಕಾರ್ಡುಗಳು ಸೂಚಿಸುವ ಪರಿಸ್ಥಿತಿಯಿಂದ ಪಾರಾಗಲು ಸಹಾಯ ಮಾಡುತ್ತವೆ ಅಥವಾ ಸಣ್ಣ ಪುಟ್ಟ ಸಂಭಾವ್ಯತೆಗಳನ್ನು ಬಿಂಬಿಸುತ್ತವೆ. ಇದೀಗ ಟಾರಟ್ ಭವಿಷ್ಯನುಡಿಯ ಜಗತ್ತಿಗೆ ತೆರಳೋಣ.

ಭವಿಷ್ಯ ತಿಳಿಯುವುದು ಹೇಗೆ
• ಮೊದಲು ನೀವು ಕೇಳಲು ಇಚ್ಛಿಸುವ ಪ್ರಶ್ನೆಯೊಂದರ ಬಗ್ಗೆ ಆಳವಾಗಿ ಚಿಂತಿಸಿ ಮತ್ತು ಅದನ್ನು ಎರಡು ಮೂರು ಬಾರಿ ಪುನರಾವರ್ತಿಸಿ. ಮತ್ತಷ್ಟು ಹೆಚ್ಚಿನ ನಿಖರತೆಗಾಗಿ, ಪ್ರಶ್ನೆಯನ್ನು ಒಂದು ಕಾಗದದಲ್ಲಿ ಬರೆಯಿರಿ.
• "ಕಾರ್ಡು ಆರಿಸಿ" ಕ್ಲಿಕ್ ಮಾಡಿದ ಬಳಿಕ ಪ್ಯಾಕಿನಿಂದ ಒಂದರ ನಂತರ ಇನ್ನೊಂದರಂತೆ ಮೂರು ಕಾರ್ಡುಗಳನ್ನು ಆರಿಸಿ
• ಮೊದಲ ಕಾರ್ಡು ನೀವು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ನಿಮ್ಮ ಮನಸ್ಥಿತಿಯನ್ನು ತೋರಿಸುತ್ತದೆ.
• ಎರಡನೇ ಕಾರ್ಡು ನಿಮ್ಮ ಅಭಿಲಾಷೆ ಈಡೇರಿಸಲು ಮಾಡಬೇಕಾದ ಪ್ರಯತ್ನಗಳನ್ನು ತೋರಿಸುತ್ತದೆ.
• ಮೂರನೇ ಕಾರ್ಡು ಕೊನೆಯಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವನ್ನು ಒದಗಿಸುತ್ತದೆ.
Chose Tarot Card